ಮಂಗಳವಾರ, ಅಕ್ಟೋಬರ್ 6, 2015

ಕೋಳಿಗೆ ಹಲ್ಲಿಲ್ಲ..

ಧರ್ತಿ ಕೋ ಆಕಾಶ್ ಪುಕಾರೇ
ಅರೆ ಆಜಾ ಆಜಾ ಪ್ರೇಮಿ ತು ಆರೇ
ಅರೆ ಆಜಾ ಆಜಾ ಪ್ರೇಮಿ ತು ಆರೇ

I love you love you...
I love you sincerely darling...

ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
ಆಲಕ್ಕೆ ಹೂವಿಲ್ಲ ಕಾಲಕ್ಕೆ ಕೊನೆಯಿಲ್ಲ
ನೀನಿಲ್ಲವಾದರೆ ನಾನಿಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
I love you..
love you love you love you love you...

ಅತ್ತರು ನಿನ್ನ ಸುಳಿವಿಲ್ಲ
ಕತ್ತಲೆ ಇಲ್ಲಿ ಯಾರಿಲ್ಲ
ಮೆತ್ತಗೆ ಬಾರೆ ನೀ ಲೈಲಾ
ನಾ ರೋಮಿಯೋ ನೀ ಜ್ಯೂಲಿಯೆಟಟ್
ಶಬಾಶ್..
ಇನ್ನು ನಿನ್ನಲ್ಲೇಕೆ ಒಲವಿಲ್ಲ, ನಿನ್ನ ಕೂಗೋಕೆ ಇನ್ನು ಬಲವಿಲ್ಲ
ಈ ಬಾಗಿಲು ಏಕೆ ತೆರೆಯೋಲ್ಲ, ನನ್ನ ಸೇರುವ ಆಸೆ ಏಕಿಲ್ಲ
ನಿನ್ನ ಕಾಣದೆ ಜೀವ ನಿಲ್ಲಲ್ಲ...
ನಿನ್ನ ಸೇರದೆ ನಾನು ಉಳಿಯಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
I love you..
love you love you love you love you...

ಅತ್ತೆಗೆ ಮೀಸೆ ಇಲ್ಲ - no moustache. !
ಕತ್ತಗೆ ಕೊಂಬಿಲ್ಲ - no horns..!
ಮುತ್ತಿನ ಮಣಿಯು ಗಾಜಲ್ಲ
ಮಣ್ಣಲ್ಲ ಹೊನ್ನಲ್ಲ ಹೆಣ್ಣಲ್ಲ..

ನೀ ಹೇಗಿಲ್ಲಿ ಬಂದ್ಯೋ ನೋಡ್ಲಿಲ್ಲ
ನೀ ನನ್ನನ್ನು ಯಾಕೆ ಕೂಗ್ಲಿಲ್ಲ
ಆ ಊರ್ವಶಿ ಕೂಡ ಹೀಗಿಲ್ಲ
ಈ ಬೇವರ್ಸಿ ಲಕ್ಕು ಯಾರ್ಗಿಲ್ಲ
ನಿನ್ನ ಮುಟ್ಟುವ ಆಸೆ ತೀರಿಲ್ಲ
ಕೆನ್ನೆ ತಟ್ಟುವ ಚಪಲ ಬಂತಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
I love you..
love you love you love you love you...

ಚಿತ್ರ : ಗಲಾಟೆ ಸಂಸಾರ
ಸಾಹಿತ್ಯ : ಚಿ ಉದಯಶಂಕರ್
ಸಂಗೀತ : ಜಿ ಕೆ ವೇಂಕಟೇಶ್
ಗಾಯನ : ಎಸ್ಪಿ ಬಾಲಸುಬ್ರಹ್ಮಣ್ಯಂ

ಭಾನುವಾರ, ಜೂನ್ 28, 2015

ಹಾರುತ ದೂರಾ ದೂರಾ

ಹಾರುತ ದೂರಾ ದೂರಾ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸ್ವೈರ ವಿಹಾರ
ಸುಂದರ ಸ್ವೈರ ವಿಹಾರ

ಏನೀ ಕಲಾವಿಲಾಸ
ಏನೀ ಮನೋವಿಕಾಸ
ಈ ನವ್ಯ ರಮ್ಯಕೋಶ
ಪೂರ್ಣೇಂದು ಹಾಸ ಭಾಸ
ಹಾರುತ ದೂರಾ ದೂರಾ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸ್ವೈರ ವಿಹಾರ
ಸುಂದರ ಸ್ವೈರ ವಿಹಾರ

ಹಾರೈಸಿ ತೆರೆದ ಕಣ್ಣ
ಕೋರೈಪ ನೂರು ಬಣ್ಣ
ಶೃಂಗಾರ ಸಂವಿಧಾನ
ಸೌಂದರ್ಯ ಸನ್ನಿಧಾನ
ಹಾರುತ ದೂರ ದೂರ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸ್ವೈರವಿಹಾರ
ಸುಂದರ ಸ್ವೈರವಿಹಾರ

ಚಿತ್ರ:- ರಾಣಿ ಹೊನ್ನಮ್ಮ
ಸಾಹಿತ್ಯ:- ಕು ರಾ ಸೀ
ಸಂಗೀತ:- ವಿಜಯ ಭಾಸ್ಕರ್
ಗಾಯನ:- ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ

ಮಂಗಳವಾರ, ಜೂನ್ 23, 2015

ತಂದೆ ನೀ ನೀಡು ಬಾ

ತಂದೆ ನೀ ನೀಡು ಬಾ, ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ, ಬಾಳ ಇರುಳಿಗೆ
ನಮ್ಮ ಅಜ್ಞಾನ ನೀ ನೀಗು ಬಾ.
ಬಾಳ ಹಾದಿಗೆ ಗುರಿ ತೋರು ಬಾ.

ನಮ್ಮ ಮನದಿಂದ ದೌರ್ಬಲ್ಯ ದೂಡು.
ಸತ್ಯ ಪಥದಲ್ಲಿ ನಡೆವಂತೆ ಮಾಡು.
ಕಷ್ಟ ನೂರಾರು ನೀ ಪಾರು ಮಾಡು.
ನಿತ್ಯ ಸಂತೋಷ ನಮಗೆಂದು ನೀಡು.
ಪ್ರೇಮ ಹೂವಾಗಲಿ, ದ್ವೇಷ ದೂರಾಗಲಿ
ಸೇಡ ವಿಷ ಜ್ವಾಲೆ ಮನದಲ್ಲಿ ಕೊನೆಯಾಗಲಿ...!!!

ಎಂಥ ಬಿರುಗಾಳಿ ಎದುರಾದರೇನು,
ನಿಂತು ತಡೆವಂಥ ಛಲ ನೀಡು ಎಂದು
ನಮ್ಮ ಸಂತೋಷ ಪರರಲ್ಲಿ ಹಂಚಿ
ನಾವು ನಲಿವಂತೆ ಮನ ನೀಡು ಎಂದು
ದ್ರೋಹ ದೂರಾಗಲಿ, ಸ್ನೇಹ ಹೊಳೆಯಾಗಲಿ
ಸ್ವಾರ್ಥ ಮನದಿಂದ ಎಂದೆಂದೂ ಕೊನೆಯಾಗಲಿ.

ಶನಿವಾರ, ಜೂನ್ 13, 2015

ನಾರಾಯಣ ತೇ

ನಾರಾಯಣತೇ ನಮೋನಮೋ ಭವ
ನಾರದ ಸನ್ನುತ ನಮೋ ನಮೋ॥

ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜನಾಭ
ಪರಮಪುರುಷ ಭವ ಭಂಜನ ಕೇಶವ
ನರಮೃಗಶರೀರ ನಮೋನಮೋ

ಜಲಧಿಶಯನ ರವಿಚಂದ್ರವಿಲೋಚನ
ಜಲರುಹ ಭವನುತ ಚರಣಯುಗ
ಬಲಿಬಂಧನ ಗೋಪೀಜನ ವಲ್ಲಭ
ನಳಿನೋದರತೇ ನಮೋನಮೋ

ಶ್ರೀವತ್ಸಲಾಂಛನ ಪೀತಾಂಬರಧರ
ದೇವಕಿನಂದನ ದಯಾನಿಧೇ
ಗೋವತ್ಸಪಾಲನ ಗೋವರ್ಧನಧರ
ಗೋಪಪ್ರಿಯತೇ ನಮೋನಮೋ

ಕೌಸಲ್ಯಾತ್ಮಜ ಕಾಮಿತಫಲದ
ಕರುಣಾಸಾಗರ ಕಾಂತಿಮಯ
ದಶರಥ ನಂದನ ದನುಜಕುಲಾಂತಕ
ಕುಶಲವ ಜನಕ ತೇ ನಮೋನಮೋ

ತಾರಾಪತಿಹರ ತಪನಕುಲೋದ್ಭವ
ತಾಪಸ ಮುನಿಗಣ ವಂದ್ಯಪದ
ಮಾರೀಚಾಂತಕ ಮಾರುತಿ ಸೇವಿತ
ವಾರಿಧಿಬಂಧನ ನಮೋನಮೋ

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ
ವೇದೋದ್ಧರಶ್ರೀ ವೇಂಕಟ ನಾಯಕ
ರಾಧಾಪ್ರಿಯತೇ ನಮೋನಮೋ

ಮೇರೇ ನೈನಾ...

ಮೇರೇ ನೈನಾ ಸಾವಣ್‌ ಬಾಧೋಂ
ಫಿರ್‌ ಭಿ ಮೇರಾ ಮನ್‌ ಪ್ಯಾಸಾ..
ಫಿರ್‌ ಭಿ ಮೇರಾ ಮನ್‌ ಪ್ಯಾಸಾ
ಮೇರೇ ನೈನಾ ಸಾವಣ್‌ ಬಾಧೋಂ
ಫಿರ್‌ ಭಿ ಮೇರಾ ಮನ್‌ ಪ್ಯಾಸಾ

ಯೇ ದಿಲ್‌ ದೀವಾನೇ
ಖೇಲ್‌ ಹೈ ಕ್ಯಾ ಜಾನೇ
ದರ್ದ್‌ ಭರಾಯೇ ಗೀತ್‌ ಕಹಾಂಸೇ
ಇನ್‌ ಹೋಟೋಂ ಪೇ ಆಯೇ..
ದೂರ್‌ ಕಹೀ ಲೇ ಜಾಯೇ
ಭೂಲ್‌ ಗಯಾ ಕ್ಯಾ ಭೂಲ್‌ ಕೇ ಭೀ ಹೈ
ಮುಝ್‌ಕೋ ಯಾದ್‌ ಝರಾ ಸಾ
ಫಿರ್‌ ಭಿ ಮೇರಾ ಮನ್‌ ಪ್ಯಾಸಾ

ಬಾತ್‌ ಪುರಾಣೀ ಹೈ
ಏಕ್‌ ಕಹಾನೀ ಹೈ
ಅಬ್‌ ಸೋಚೂ ತುಮ್ಹೇ ಯಾದ್‌ ನಹೀ ಹೈ
ಅಬ್‌ ಸೋಚೂ ನಹಿ ಭೂಲೇ....
ಓ ಸಾವಣ್‌ ಕೇ ಝೂಲೇ...
ಋತ್‌ ಆಯೇ ಋತ್‌ ಜಾಯೇ ದೇಖರ್‌
ಝೂಟಾ ಏಕ್‌ ದಿಲಾಶಾ...
ಫಿರ್‌ ಭಿ ಮೆರಾ ಮನ್‌ ಪ್ಯಾಸಾ...

ಬರ್‌ಸೋಂ ಬೀತ್‌ ಗಯೇ
ಹಮ್‌ಕೋ ಮಿಲೇ ಬಿಚ್‌ಡೇ
ಬಿಜುಲೀ ಬನ್‌ಕರ್‌ ಗಗನ್‌ಪೆ ಚಮ್‌ಕೀ
ಬೀತೇ ಸಮಯ್‌ ಕೀ ರೇಖಾ...
ಮೈನೇ ತುಮ್‌ ವೋ ದೇಖಾ..
ಮನ್‌ ಸಂಗ್‌ ಆಂಖ್‌-ಮಿಚೋಲೀ ಖೇಲೇ
ಆಶಾ ಔರ್‌ ನಿರಾಶಾ..
ಫಿರ್‌ ಭೀ ಮೇರಾ ಮನ್‌ ಪ್ಯಾಸಾ..
ಮೇರೇ ನೈನಾ ಸಾವಣ್‌ ಬಾಧೋಂ
ಫಿರ್‌ ಭೀ ಮೇರಾ ಮನ್‌ ಪ್ಯಾಸಾ..


[ಚಿತ್ರ - ಮೆಹಬೂಬ;
ಸಾಹಿತ್ಯ - ಆನಂದ್‌ ಭಕ್ಷಿ]

ಬುಧವಾರ, ಜೂನ್ 10, 2015

ಕವಿಶೈಲದಲ್ಲಿ ಸಂಧ್ಯೆ

ದೃಷ್ಟಿದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ..!

ಪಶ್ಚಿಮ ಗಿರಿಶಿರದಲಿ ಸಂಧ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ..!

ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ.!

ತೆರೆ ತೆರೆ ತೆರೆಯೆದ್ದರಣ್ಯ ಶ್ರೇಣಿ,
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ,
ಅಸಂಖ್ಯವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ,
ವೀಚಿ ವೀಚಿ..!

ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!
ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?
ಭವ್ಯಾಸ್ಫುಟವಿದು-ಶರೀರ ಸೀಮಾ
ವಿಹೀನಧಾಮ..!

ಆಲಿಸು! ಕೇಳುತಲಿದೆ ಓಂಕಾರ:
ನಿತ್ಯನಿರಂತರ ಅಲಿ ಝೇಂಕಾರ!
ಮನವೇ, ಧ್ಯಾನದಿ ಮುಳುಗು ವಿಧಾನದಿ:
ನುಂಗಲಿ ನಿನ್ನಂ ತಪಃ ಸುಷುಪ್ತಿ,
ಅನಂತ ತೃಪ್ತಿ..!

ಕವಿ:- ಕುವೆಂಪು.

ಶಬರಿ


ಕಾದಿರುವಳು ಶಬರಿ,
ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು

ವನವನವ ಸುತ್ತಿ ಸುಳಿದು
ತರುತರುವನಲೆದು ತಿರಿದು
ಬಿರಿವೂಗಳಾಯ್ದು ತಂದು
ತನಿವಣ್ಗಳಾಯ್ದು ತಂದು;

ಕೊಳದಲ್ಲಿ ಮುಳುಗಿ ಮಿಂದು
ಬಿಳಿ ನಾರು ಮುಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸತಿಲಲಿ ಕಾದು ನಿಂದು.

ಎಳೆಗಾಳಿ ತೀಡುತಿರಲು
ಕಿವಿಯೆತ್ತಿ ಆಲಿಸುವಳು
ಎಲೆಯಲುಗೆ ಗಾಳಿಯಲ್ಲಿ
ನಡೆ ಸಪ್ಪುಳೆಂದು ಬಗೆದು.

ದೂರಕ್ಕೆ ನೋಳ್ಪೆನೆಂದು
ಮರವೇರಿ ದಿಟ್ಟಿಸುವಳು
ಗಿರಿ ಮೇಲಕೈದಿ ಕೈಯ
ಮರೆ ಮಾಡಿ ನೋಡುತಿಹಳು

ಬಾ ರಾಮ, ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸಿಹಳು
ಕಳೆದಿಹವು ವರುಷ ಹಲವು.


ಶಬರಿವೊಲು ಜನವು, ದಿನವೂ
ಯುಗಯುಗವು ಕರೆಯುತಿಹುದು
ಕರೆ ಇಳೆಗಳೇಳಲರಸಿ
ತವಕದಲಿ ತಪಿಸುತಿಹುದು.

ಭರವಸೆಗಳಳಿಯವಾಗಿ
ಮನವೆಲ್ಲ ಬಯಕೆಯಾಗಿ
ಹಗಲೆಲ್ಲ ಕಾದು ಕೂಗಿ
ಇರುಳೆಲ್ಲ ಜಾಗರಾಗಿ;

ಬಂದಾನೊ ಬಾರನೋ ಓ
ಕಂಡಾನೊ ಕಾಣನೋ ಓ
ಎಂದೆಂದು ಜಪಿಸಿ ತಪಿಸಿ
ಶಂಕಾತುರಂಗಳೂರಿ.

ಬಾ ರಾಮ, ಬಾರ, ಬಾರಾ
ಬಡವರನು ಕಾಯು ಬಾರಾ
ಕಂಗಾಣದಿವರ ಪ್ರೇಮ
ನುಡಿಸೋತ ಮೂಕ ಪ್ರೇಮ.

-ಕಾದಿರುವುದು ಜನವು
ರಾಮ ಬರುವನೆಂದು
ತಮ್ಮ ಪೂಜೆಗೊಳುವನೆಂದು

ಕವಿ :- ವಿ. ಸೀತಾರಾಮಯ್ಯ