ಮಂಗಳವಾರ, ಅಕ್ಟೋಬರ್ 6, 2015

ಕೋಳಿಗೆ ಹಲ್ಲಿಲ್ಲ..

ಧರ್ತಿ ಕೋ ಆಕಾಶ್ ಪುಕಾರೇ
ಅರೆ ಆಜಾ ಆಜಾ ಪ್ರೇಮಿ ತು ಆರೇ
ಅರೆ ಆಜಾ ಆಜಾ ಪ್ರೇಮಿ ತು ಆರೇ

I love you love you...
I love you sincerely darling...

ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
ಆಲಕ್ಕೆ ಹೂವಿಲ್ಲ ಕಾಲಕ್ಕೆ ಕೊನೆಯಿಲ್ಲ
ನೀನಿಲ್ಲವಾದರೆ ನಾನಿಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
I love you..
love you love you love you love you...

ಅತ್ತರು ನಿನ್ನ ಸುಳಿವಿಲ್ಲ
ಕತ್ತಲೆ ಇಲ್ಲಿ ಯಾರಿಲ್ಲ
ಮೆತ್ತಗೆ ಬಾರೆ ನೀ ಲೈಲಾ
ನಾ ರೋಮಿಯೋ ನೀ ಜ್ಯೂಲಿಯೆಟಟ್
ಶಬಾಶ್..
ಇನ್ನು ನಿನ್ನಲ್ಲೇಕೆ ಒಲವಿಲ್ಲ, ನಿನ್ನ ಕೂಗೋಕೆ ಇನ್ನು ಬಲವಿಲ್ಲ
ಈ ಬಾಗಿಲು ಏಕೆ ತೆರೆಯೋಲ್ಲ, ನನ್ನ ಸೇರುವ ಆಸೆ ಏಕಿಲ್ಲ
ನಿನ್ನ ಕಾಣದೆ ಜೀವ ನಿಲ್ಲಲ್ಲ...
ನಿನ್ನ ಸೇರದೆ ನಾನು ಉಳಿಯಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
I love you..
love you love you love you love you...

ಅತ್ತೆಗೆ ಮೀಸೆ ಇಲ್ಲ - no moustache. !
ಕತ್ತಗೆ ಕೊಂಬಿಲ್ಲ - no horns..!
ಮುತ್ತಿನ ಮಣಿಯು ಗಾಜಲ್ಲ
ಮಣ್ಣಲ್ಲ ಹೊನ್ನಲ್ಲ ಹೆಣ್ಣಲ್ಲ..

ನೀ ಹೇಗಿಲ್ಲಿ ಬಂದ್ಯೋ ನೋಡ್ಲಿಲ್ಲ
ನೀ ನನ್ನನ್ನು ಯಾಕೆ ಕೂಗ್ಲಿಲ್ಲ
ಆ ಊರ್ವಶಿ ಕೂಡ ಹೀಗಿಲ್ಲ
ಈ ಬೇವರ್ಸಿ ಲಕ್ಕು ಯಾರ್ಗಿಲ್ಲ
ನಿನ್ನ ಮುಟ್ಟುವ ಆಸೆ ತೀರಿಲ್ಲ
ಕೆನ್ನೆ ತಟ್ಟುವ ಚಪಲ ಬಂತಲ್ಲ
ಕೋಳಿಗೆ ಹಲ್ಲಿಲ್ಲ ಗೂಳಿಗೆ ಮಾತಿಲ್ಲ
ತಾಳಿಯು ಇನ್ನೂ ನಿಂಗಿಲ್ಲ
I love you..
love you love you love you love you...

ಚಿತ್ರ : ಗಲಾಟೆ ಸಂಸಾರ
ಸಾಹಿತ್ಯ : ಚಿ ಉದಯಶಂಕರ್
ಸಂಗೀತ : ಜಿ ಕೆ ವೇಂಕಟೇಶ್
ಗಾಯನ : ಎಸ್ಪಿ ಬಾಲಸುಬ್ರಹ್ಮಣ್ಯಂ

ಭಾನುವಾರ, ಜೂನ್ 28, 2015

ಹಾರುತ ದೂರಾ ದೂರಾ

ಹಾರುತ ದೂರಾ ದೂರಾ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸ್ವೈರ ವಿಹಾರ
ಸುಂದರ ಸ್ವೈರ ವಿಹಾರ

ಏನೀ ಕಲಾವಿಲಾಸ
ಏನೀ ಮನೋವಿಕಾಸ
ಈ ನವ್ಯ ರಮ್ಯಕೋಶ
ಪೂರ್ಣೇಂದು ಹಾಸ ಭಾಸ
ಹಾರುತ ದೂರಾ ದೂರಾ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸ್ವೈರ ವಿಹಾರ
ಸುಂದರ ಸ್ವೈರ ವಿಹಾರ

ಹಾರೈಸಿ ತೆರೆದ ಕಣ್ಣ
ಕೋರೈಪ ನೂರು ಬಣ್ಣ
ಶೃಂಗಾರ ಸಂವಿಧಾನ
ಸೌಂದರ್ಯ ಸನ್ನಿಧಾನ
ಹಾರುತ ದೂರ ದೂರ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸ್ವೈರವಿಹಾರ
ಸುಂದರ ಸ್ವೈರವಿಹಾರ

ಚಿತ್ರ:- ರಾಣಿ ಹೊನ್ನಮ್ಮ
ಸಾಹಿತ್ಯ:- ಕು ರಾ ಸೀ
ಸಂಗೀತ:- ವಿಜಯ ಭಾಸ್ಕರ್
ಗಾಯನ:- ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ

ಮಂಗಳವಾರ, ಜೂನ್ 23, 2015

ತಂದೆ ನೀ ನೀಡು ಬಾ

ತಂದೆ ನೀ ನೀಡು ಬಾ, ಶಕ್ತಿ ಮನಸಿಗೆ
ಜ್ಯೋತಿ ನೀನಾಗು ಬಾ, ಬಾಳ ಇರುಳಿಗೆ
ನಮ್ಮ ಅಜ್ಞಾನ ನೀ ನೀಗು ಬಾ.
ಬಾಳ ಹಾದಿಗೆ ಗುರಿ ತೋರು ಬಾ.

ನಮ್ಮ ಮನದಿಂದ ದೌರ್ಬಲ್ಯ ದೂಡು.
ಸತ್ಯ ಪಥದಲ್ಲಿ ನಡೆವಂತೆ ಮಾಡು.
ಕಷ್ಟ ನೂರಾರು ನೀ ಪಾರು ಮಾಡು.
ನಿತ್ಯ ಸಂತೋಷ ನಮಗೆಂದು ನೀಡು.
ಪ್ರೇಮ ಹೂವಾಗಲಿ, ದ್ವೇಷ ದೂರಾಗಲಿ
ಸೇಡ ವಿಷ ಜ್ವಾಲೆ ಮನದಲ್ಲಿ ಕೊನೆಯಾಗಲಿ...!!!

ಎಂಥ ಬಿರುಗಾಳಿ ಎದುರಾದರೇನು,
ನಿಂತು ತಡೆವಂಥ ಛಲ ನೀಡು ಎಂದು
ನಮ್ಮ ಸಂತೋಷ ಪರರಲ್ಲಿ ಹಂಚಿ
ನಾವು ನಲಿವಂತೆ ಮನ ನೀಡು ಎಂದು
ದ್ರೋಹ ದೂರಾಗಲಿ, ಸ್ನೇಹ ಹೊಳೆಯಾಗಲಿ
ಸ್ವಾರ್ಥ ಮನದಿಂದ ಎಂದೆಂದೂ ಕೊನೆಯಾಗಲಿ.

ಶನಿವಾರ, ಜೂನ್ 13, 2015

ನಾರಾಯಣ ತೇ

ನಾರಾಯಣತೇ ನಮೋನಮೋ ಭವ
ನಾರದ ಸನ್ನುತ ನಮೋ ನಮೋ॥

ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜನಾಭ
ಪರಮಪುರುಷ ಭವ ಭಂಜನ ಕೇಶವ
ನರಮೃಗಶರೀರ ನಮೋನಮೋ

ಜಲಧಿಶಯನ ರವಿಚಂದ್ರವಿಲೋಚನ
ಜಲರುಹ ಭವನುತ ಚರಣಯುಗ
ಬಲಿಬಂಧನ ಗೋಪೀಜನ ವಲ್ಲಭ
ನಳಿನೋದರತೇ ನಮೋನಮೋ

ಶ್ರೀವತ್ಸಲಾಂಛನ ಪೀತಾಂಬರಧರ
ದೇವಕಿನಂದನ ದಯಾನಿಧೇ
ಗೋವತ್ಸಪಾಲನ ಗೋವರ್ಧನಧರ
ಗೋಪಪ್ರಿಯತೇ ನಮೋನಮೋ

ಕೌಸಲ್ಯಾತ್ಮಜ ಕಾಮಿತಫಲದ
ಕರುಣಾಸಾಗರ ಕಾಂತಿಮಯ
ದಶರಥ ನಂದನ ದನುಜಕುಲಾಂತಕ
ಕುಶಲವ ಜನಕ ತೇ ನಮೋನಮೋ

ತಾರಾಪತಿಹರ ತಪನಕುಲೋದ್ಭವ
ತಾಪಸ ಮುನಿಗಣ ವಂದ್ಯಪದ
ಮಾರೀಚಾಂತಕ ಮಾರುತಿ ಸೇವಿತ
ವಾರಿಧಿಬಂಧನ ನಮೋನಮೋ

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ
ವೇದೋದ್ಧರಶ್ರೀ ವೇಂಕಟ ನಾಯಕ
ರಾಧಾಪ್ರಿಯತೇ ನಮೋನಮೋ

ಮೇರೇ ನೈನಾ...

ಮೇರೇ ನೈನಾ ಸಾವಣ್‌ ಬಾಧೋಂ
ಫಿರ್‌ ಭಿ ಮೇರಾ ಮನ್‌ ಪ್ಯಾಸಾ..
ಫಿರ್‌ ಭಿ ಮೇರಾ ಮನ್‌ ಪ್ಯಾಸಾ
ಮೇರೇ ನೈನಾ ಸಾವಣ್‌ ಬಾಧೋಂ
ಫಿರ್‌ ಭಿ ಮೇರಾ ಮನ್‌ ಪ್ಯಾಸಾ

ಯೇ ದಿಲ್‌ ದೀವಾನೇ
ಖೇಲ್‌ ಹೈ ಕ್ಯಾ ಜಾನೇ
ದರ್ದ್‌ ಭರಾಯೇ ಗೀತ್‌ ಕಹಾಂಸೇ
ಇನ್‌ ಹೋಟೋಂ ಪೇ ಆಯೇ..
ದೂರ್‌ ಕಹೀ ಲೇ ಜಾಯೇ
ಭೂಲ್‌ ಗಯಾ ಕ್ಯಾ ಭೂಲ್‌ ಕೇ ಭೀ ಹೈ
ಮುಝ್‌ಕೋ ಯಾದ್‌ ಝರಾ ಸಾ
ಫಿರ್‌ ಭಿ ಮೇರಾ ಮನ್‌ ಪ್ಯಾಸಾ

ಬಾತ್‌ ಪುರಾಣೀ ಹೈ
ಏಕ್‌ ಕಹಾನೀ ಹೈ
ಅಬ್‌ ಸೋಚೂ ತುಮ್ಹೇ ಯಾದ್‌ ನಹೀ ಹೈ
ಅಬ್‌ ಸೋಚೂ ನಹಿ ಭೂಲೇ....
ಓ ಸಾವಣ್‌ ಕೇ ಝೂಲೇ...
ಋತ್‌ ಆಯೇ ಋತ್‌ ಜಾಯೇ ದೇಖರ್‌
ಝೂಟಾ ಏಕ್‌ ದಿಲಾಶಾ...
ಫಿರ್‌ ಭಿ ಮೆರಾ ಮನ್‌ ಪ್ಯಾಸಾ...

ಬರ್‌ಸೋಂ ಬೀತ್‌ ಗಯೇ
ಹಮ್‌ಕೋ ಮಿಲೇ ಬಿಚ್‌ಡೇ
ಬಿಜುಲೀ ಬನ್‌ಕರ್‌ ಗಗನ್‌ಪೆ ಚಮ್‌ಕೀ
ಬೀತೇ ಸಮಯ್‌ ಕೀ ರೇಖಾ...
ಮೈನೇ ತುಮ್‌ ವೋ ದೇಖಾ..
ಮನ್‌ ಸಂಗ್‌ ಆಂಖ್‌-ಮಿಚೋಲೀ ಖೇಲೇ
ಆಶಾ ಔರ್‌ ನಿರಾಶಾ..
ಫಿರ್‌ ಭೀ ಮೇರಾ ಮನ್‌ ಪ್ಯಾಸಾ..
ಮೇರೇ ನೈನಾ ಸಾವಣ್‌ ಬಾಧೋಂ
ಫಿರ್‌ ಭೀ ಮೇರಾ ಮನ್‌ ಪ್ಯಾಸಾ..


[ಚಿತ್ರ - ಮೆಹಬೂಬ;
ಸಾಹಿತ್ಯ - ಆನಂದ್‌ ಭಕ್ಷಿ]

ಬುಧವಾರ, ಜೂನ್ 10, 2015

ಕವಿಶೈಲದಲ್ಲಿ ಸಂಧ್ಯೆ

ದೃಷ್ಟಿದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ..!

ಪಶ್ಚಿಮ ಗಿರಿಶಿರದಲಿ ಸಂಧ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ..!

ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ.!

ತೆರೆ ತೆರೆ ತೆರೆಯೆದ್ದರಣ್ಯ ಶ್ರೇಣಿ,
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ,
ಅಸಂಖ್ಯವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ,
ವೀಚಿ ವೀಚಿ..!

ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!
ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?
ಭವ್ಯಾಸ್ಫುಟವಿದು-ಶರೀರ ಸೀಮಾ
ವಿಹೀನಧಾಮ..!

ಆಲಿಸು! ಕೇಳುತಲಿದೆ ಓಂಕಾರ:
ನಿತ್ಯನಿರಂತರ ಅಲಿ ಝೇಂಕಾರ!
ಮನವೇ, ಧ್ಯಾನದಿ ಮುಳುಗು ವಿಧಾನದಿ:
ನುಂಗಲಿ ನಿನ್ನಂ ತಪಃ ಸುಷುಪ್ತಿ,
ಅನಂತ ತೃಪ್ತಿ..!

ಕವಿ:- ಕುವೆಂಪು.

ಶಬರಿ


ಕಾದಿರುವಳು ಶಬರಿ,
ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು

ವನವನವ ಸುತ್ತಿ ಸುಳಿದು
ತರುತರುವನಲೆದು ತಿರಿದು
ಬಿರಿವೂಗಳಾಯ್ದು ತಂದು
ತನಿವಣ್ಗಳಾಯ್ದು ತಂದು;

ಕೊಳದಲ್ಲಿ ಮುಳುಗಿ ಮಿಂದು
ಬಿಳಿ ನಾರು ಮುಡಿಯನುಟ್ಟು
ತಲೆವಾಗಿಲಿಂಗೆ ಬಂದು
ಹೊಸತಿಲಲಿ ಕಾದು ನಿಂದು.

ಎಳೆಗಾಳಿ ತೀಡುತಿರಲು
ಕಿವಿಯೆತ್ತಿ ಆಲಿಸುವಳು
ಎಲೆಯಲುಗೆ ಗಾಳಿಯಲ್ಲಿ
ನಡೆ ಸಪ್ಪುಳೆಂದು ಬಗೆದು.

ದೂರಕ್ಕೆ ನೋಳ್ಪೆನೆಂದು
ಮರವೇರಿ ದಿಟ್ಟಿಸುವಳು
ಗಿರಿ ಮೇಲಕೈದಿ ಕೈಯ
ಮರೆ ಮಾಡಿ ನೋಡುತಿಹಳು

ಬಾ ರಾಮ, ರಾಮ ಎಂದು
ಬರುತಿಹನು ಇಹನು ಎಂದು
ಹಗಲಿರುಳು ತವಕಿಸಿಹಳು
ಕಳೆದಿಹವು ವರುಷ ಹಲವು.


ಶಬರಿವೊಲು ಜನವು, ದಿನವೂ
ಯುಗಯುಗವು ಕರೆಯುತಿಹುದು
ಕರೆ ಇಳೆಗಳೇಳಲರಸಿ
ತವಕದಲಿ ತಪಿಸುತಿಹುದು.

ಭರವಸೆಗಳಳಿಯವಾಗಿ
ಮನವೆಲ್ಲ ಬಯಕೆಯಾಗಿ
ಹಗಲೆಲ್ಲ ಕಾದು ಕೂಗಿ
ಇರುಳೆಲ್ಲ ಜಾಗರಾಗಿ;

ಬಂದಾನೊ ಬಾರನೋ ಓ
ಕಂಡಾನೊ ಕಾಣನೋ ಓ
ಎಂದೆಂದು ಜಪಿಸಿ ತಪಿಸಿ
ಶಂಕಾತುರಂಗಳೂರಿ.

ಬಾ ರಾಮ, ಬಾರ, ಬಾರಾ
ಬಡವರನು ಕಾಯು ಬಾರಾ
ಕಂಗಾಣದಿವರ ಪ್ರೇಮ
ನುಡಿಸೋತ ಮೂಕ ಪ್ರೇಮ.

-ಕಾದಿರುವುದು ಜನವು
ರಾಮ ಬರುವನೆಂದು
ತಮ್ಮ ಪೂಜೆಗೊಳುವನೆಂದು

ಕವಿ :- ವಿ. ಸೀತಾರಾಮಯ್ಯ

ಪ್ರಾರ್ಥನೆ

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ
ದನಿಯು ದನ ಕಾಯುವನ ಕೊಳಲೊಡನೆ ಬರಲಿ
ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ

ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ
ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ
ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ
ಗೋಪಾಲನಾಗಿರುವ ತಿಮ್ಮನೆನಗಿರಲಿ

ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
ನನ್ನಾಸೆ ಏನೆಂದು ಎಲ್ಲರರಿತಿರಲಿ
ಸಗ್ಗವಿವನೊಳಗೊಂಡು ಇರಲು ಸಗ್ಗವೆ ಇರಲಿ
ನರಕವಿವನೊಳಗೊಂಡು ಇರಲು ನರಕವೆ ಇರಲಿ

ಸಾಹಿತ್ಯ:- ಕುವೆಂಪು 

ಅಂಗಳದಲಿ ರಾಮ..

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ ಬೇಡ ಬೇಡ ಎಂದು ತಾ ಬಿಸಾಡಿದ ॥೨॥

ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ
ಅಂಜಿದನು ಎನ್ನುತಿದ್ದಳು ॥೩॥

ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀ ರಾಮನ ಎತ್ತಿ ಮುದ್ದಾಡಿದ ॥೪॥

ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿ ಕೇಶವ
ರಘು ವಂಶವನ್ನೇ ಕೊಂಡಾಡಿದ ॥೫॥

ಮಂಗಳವಾರ, ಜೂನ್ 9, 2015

ತಾಯೆ ಬಾರ ಮೊಗವ ತೋರ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ

ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು.

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೋ
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೋ
ತೆನೆಕೆನೆಯ ಗಾಳಿಯೋ ಖಗಮೃಗೋರಗಾಳಿಯೋ
ನದಿ ನಗರ ನಗಾಳಿಯೋ ಇಲ್ಲಿಲ್ಲದುದುಳಿದುದೆ?
ಜೇನು ಸುರಿವ ಹಾಲು ಹರಿವ  ದಿವಂ ಭೂಮಿಗಿಳಿದುದೆ?

ಬುಗುರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ?
ಪಾಂಡವರಜ್ಞಾತಮಿದ್ದ, ವಲಲಂ ಕೀಚಕನ ಗೆದ್ದ;
ಕುರುಕುಲಮುಂಗದನಮೆದ್ದ ನಾಡು ನೋಡಿದಲ್ಲವೇ?
ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೇ?

ಶಕವಿಜೇತನಮರ ಶಾತವಾಹನಾಖ್ಯನೀ ಶಕಂ,
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ
ಚಳುಕ್ಯರಾಷ್ಟ್ರಕೂಟರೆಲ್ಲಿ ಗಂಗರಾ ಕದಂಬರೆಲ್ಲಿ
ಹೊಯ್ಸಳ ಕಳಚುರ್ಯರೆಲ್ಲ ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು.

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ
ಶರ್ವ ಪಂಪ ರನ್ನರ, ಲಕ್ಷ್ಮೀಪತಿ ಜನ್ನರ
ಷಡಕ್ಷರಿ ಮುದ್ದಣ್ಣರ ಪುರಂದರವರೇಣ್ಯರ
ತಾಯೆ ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ

ಹಳೆಯಬೀಡ ಬೇಲನಾಡ ಮಾಡಮೆನಿತೊ ಸುಂದರಂ,
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ,
ಇಲ್ಲಿಲ್ಲದ ಶಿಲ್ಪಮಿಲ್ಲ, ನಿನ್ನ ಕಲ್ಲೆ ನುಡಿವುದಲ್ಲ
ಹಿಂಗತೆಯಿನಿವಾಲಸೊಲ್ಲನೆಮ್ಮ ತೃಷೆಗೆ ದಕ್ಕಿಸು
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು.

ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚುಪಡಿಯನಾಂತರೆನಿತೊ ತಕ್ಕುದಂ?
ಎನಿತೊ ಹಳೆಯ ಕಾಲದಿಂದ ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ ನಿನಗೆ ಮರೆವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ನೀನದನ್ನ ನವಶಕ್ತಿಯನೆಬ್ಬಿಸು
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!

ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರತೆಗೊಳವೆ ಕೊರತೆ ಬತ್ತದು ನಿನ್ನೂಟೆಯು
ಸೋಲಗೆಲ್ಲವಾರಿಗಿಲ್ಲ ಸೋತು ನೀನೆ ಗೆದ್ದೆಯಲ್ಲ
ನಿನ್ನನಳಿವು ತಟ್ಟಲೊಲ್ಲ ತಾಳಿಕೋಟೆ ಸಾಸಿರಂ
ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ!

ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ
ನಮ್ಮೆದೆಯಂ ತಾಯೆ ಬಲಿಸು ಎಲ್ಲರ ಬಾಯಲ್ಲಿ ನೆಲೆಸು
ನಮ್ಮ ಮನಮನೊಂದೆ ಕಲಸು ಇದನೊಂದನೆ ಕೋರುವೆ
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ?

ಸಾಹಿತ್ಯ: ಮಂಜೇಶ್ವರ ಗೋವಿಂದ ಪೈ 

ಕನ್ನಡಕೆ ಹೋರಾಡು

ಕನ್ನಡಕ್ಕೆ ಹೋರಾಡು
ಕನ್ನಡದ ಕಂದಾ;
ಕನ್ನಡವ ಕಾಪಾಡು
ನನ್ನ ಆನಂದಾ!
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ;
ಮರೆತೆಯಾದರೆ ಅಯ್ಯೊ
ಮರೆತಂತೆ ನನ್ನ!

ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಗೆ;
ತಾಯಿಯಪ್ಪುಗೆಯಂತೆ
ಬಲುಸೊಗಸು ಮೆಯ್ಗೆ;
ಗುರುವಿನೊಳ್ನುಡಿಯಂತೆ
ಶ್ರೇಯಸ್ಸು ಬಾಳ್ಗೆ;
ತಾಯ್ನುಡಿಗೆ ದುಡಿದು ಮಡಿ,
ಇಹಪರಗಳೇಳ್ಗೆ!

ರನ್ನ ಪಂಪರ ನಚ್ಚು
ಕನ್ನಡದ ಸೊಲ್ಲು;
ಬಸವದೇವನ ಮೆಚ್ಚು,
ಹರಿಹರನ ಗೆಲ್ಲು;
ನಾರಣಪ್ಪನ ಕೆಚ್ಚು
ಬತ್ತಳಿಕೆ ಬಿಲ್ಲು;
ಕನ್ನಡವ ಕೊಲುವ ಮುನ್
ಓ ನನ್ನ ಕೊಲ್ಲು!

ನೆವವು ಏನಾದರೇನ್,
ಹೊರನುಡಿಯು ಹೊರೆಯೈ;
ನಿನ್ನ ನಾಡೊಡೆಯ ನೀನ್;
ವೈರಿಯನು ತೊರೆಯೈ.
ಕನ್ನಡದ ನಾಡಿನಲಿ
ಕನ್ನಡವ ಮೆರೆಯೈ;
ತಾಯ್ಗಾಗಿ ಹೋರಾಡಿ
ತಾಯ್ನುಡಿಯ ಪೊರೆಯೈ!

ಕನ್ನಡಕೆ ಬಂದಿಳಿಕೆ
ಹಿಡಿಯುತಿಹುದಿಂದು;
ನೀ ನಿದ್ದೆ ಮಾಡಿದರೆ
ಹಾಕುವುದು ಕೊಂದು!
ಎದ್ದೇಳೊ, ಕಂದಯ್ಯ,
ಕತ್ತಿಯನು ಕೊಳ್ಳೊ!
ತಳಿರು ವೇಷದ ರೋಗ
ಬಂದಿಳಿಕೆ, ತಳ್ಳೊ!

ದಮ್ಮಯ್ಯ, ಕಂದಯ್ಯ,
ಬೇಡುವೆನು ನಿನ್ನ;
ಕನ್ನಡಮ್ಮನ ಹರಕೆ,
ಮರೆಯದಿರು, ಚಿನ್ನಾ!
ಮರೆತೆಯಾದರೆ ಅಯ್ಯೊ,
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ, ರನ್ನಾ!

ಸಾಹಿತ್ಯ: ಕುವೆಂಪು 

ಹುತ್ತರಿ ಹಾಡು

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ..!
ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ.!
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ..!
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ...!
ಅಲ್ಲಿ ಆ ಕಡೆ ನೋಡಲಾ..!
ಅಲ್ಲಿ ಕೊಡಗರ ನಾಡಲಾ..!
ಅಲ್ಲಿ ಕೊಡವರ ಬೀಡಲಾ..!

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು,.?
ಕವಣೆ ತಿರಿ ಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು...!
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ..!
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ..!
ಅವರು ಸೋಲ್ ಸಾವರಿಯರು!
ಅವರು ಕಡುಗಲಿ ಗರಿಯರು!
ಅವರೆ ಕೊಡಗಿನ ಹಿರಿಯರು!

ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಂಡ ಕಟ್ಟು ಕಟ್ಟಳೆ, ರೀತಿ ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು.!
ಜಮ್ಮ ಕೊಡಗಿದು ನಮ್ಮದು..!
ನಮ್ಮೊಡಲ್ ಬಿಡಲಮ್ಮದು...!

ಇದು ಅಗಸ್ತ್ಯನ ತಪದ ಮಣೆ, ಕಾವೇರಿ ತಾಯ ತವರ್ಮನೆ
ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ.!
ಇದಕೊ.! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು..!
ಇದೊ...! ಇದೋ.! ಇಲ್ಲುರುಳ್ದ ಹಾಲೇರಿಯರ ಬಲಗಿರಿ ಶೃಂಗವು.!
ವಿಧಿಯ ಮಾಟದ ಕೊಡಗಿದು..!
ಮೊದಲೆ ನಮ್ಮದು, ಕಡೆಗಿದು.!
ಕದಲದೆಮ್ಮನು; ಬೆಡಗಿದು...!

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ.?
ಸುಮ್ಮನಿತ್ತರೊ ದಟ್ಟಿ ಕುಪ್ಪಸ ಹಾಡು ಹುತ್ತರಿಗೇಳಿರಿ..!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ.!
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ..!
ನೆಮ್ಮದಿಯನಿದು ತಾಳಲಿ.!
ಅಮ್ಮೆಯಾ ಬಲ ತೋಳಲಿ..!
ನಮ್ಮ ಕೊಡಗಿದು ಬಾಳಲಿ..!

ಸಾಹಿತ್ಯ: ಪಂಜೆ ಮಂಗೇಶರಾಯರು

ಸ್ವಾಮಿ ವಿಮೋಚನಾನಂದ ಗೀತೆ

ಹರಿವರಾಸನಂ ವಿಶ್ವಮೋಹನಂ
ಹರಿದಧೀಶ್ವರಂ ಆರಾಧ್ಯಪಾದುಕಂ
ಅರಿವಿಮರ್ದನಂ ನಿತ್ಯನರ್ತನಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶರಣಕೀರ್ತನಂ ಭಕ್ತಮಾನಸಂ
ಭರಣಲೋಲುಪಂ ನರ್ತನಾಲಸಂ
ಅರುಣಭಾಸುರಂ ಭೂತನಾಯಕಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಪ್ರಣಯಸತ್ಯಕಂ ಪ್ರಾಣನಾಯಕಂ
ಪ್ರಣತಕಲ್ಪಕಂ ಸುಪ್ರಭಾಂಚಿತಂ
ಪ್ರಣವಮಂದಿರಂ ಕೀರ್ತನಪ್ರಿಯಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ತುರಗವಾಹನಂ ಸುಂದರಾನನಂ
ವರಗದಾಯುಧಂ ವೇದವರ್ಣಿತಂ
ಗುರುಕೃಪಾಕರಂ ಕೀರ್ತನಪ್ರಿಯಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ತ್ರಿಭುವನಾರ್ಚಿತಂ ದೇವತಾತ್ಮಕಂ
ತ್ರಿನಯನಂ ಪ್ರಭುಂ ದಿವ್ಯದೇಶಿಕಂ
ತ್ರಿದಶಪೂಜಿತಂ ಚಿಂತಿತಪ್ರದಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಭವಭಯಾಪಹಂ ಭಾವುಕಾವಹಂ
ಭುವನಮೋಹನಂ ಭೂತಿಭೂಷಣಂ
ಧವಳವಾಹನಂ ದಿವ್ಯವಾರಣಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಕಲಮೃದುಸ್ಮಿತಂ ಸುಂದರಾನನಂ
ಕಲಭಕೋಮಲಂ ಗಾತ್ರಮೋಹನಂ
ಕಲಭಕೇಸರೀ ವಾಜಿವಾಹನಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ಶ್ರಿತಜನಪ್ರಿಯಂ ಚಿಂತಿತಪ್ರದಂ
ಶ್ರುತಿವಿಭೂಷಣಂ ಸಾಧುಜೀವನಂ
ಶ್ರುತಿಮನೋಹರಂ ಗೀತಲಾಲಸಂ
ಹರಿಹರಾತ್ಮಜಂ ದೇವಮಾಶ್ರಯೇ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ

ನಾದಮಯ...

ನಾದಮಯ….
ನಾದಮಯ ಈ ಲೋಕವೆಲ್ಲ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಲೋಕವೆಲ್ಲಾ
ನಾದಮಯ…

ಸ್ವರಗಳ ಮಾಧುರ್ಯ ರಾಗದ ಸೌಂದರ್ಯ
ಮೃಗಗಳ ತಣಿಸೆ, ಖಗಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ,
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು, ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು

ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯ....

ಸಾ ಮಾ ಗಾ ರೀ ಗಮದನಿಸ ನಾದಮಯಾ..
ನಿದಮಗರಿಸ ದಮಗರಿಸ ಮಗರಿಸ ದನಿಸ ರಿಗಮ ದನಿಸ ನಾದಮಯಾ...
ಗರಿಸ ನಿದನಿ ರಿಸನಿ ದಮದ ಸಗ ಮದನಿ ನಾದಮಯಾ..
ಸರಿಗರಿ ಸನಿದನಿ ಸನಿದಮಗರಿಸನಿ ದಾ ಗಾ ದಾ ಗಾ ರಿಗಮಗ ರಿಸನಿ ರೀ ಮಾ ನಿ ರಿ ಮಗರಿ ಮಗರಿ ಸನಿಸ
ಸರಿಸನಿ ನಿಸನಿದ ಮದನಿಸ ನಿ ನಿಸನಿದ ದನಿದಮ ಗಮದನಿ
ಸರಿಗರಿ ಸನಿದನಿ
ಸನಿದಪಮಗರಿಸ
ಗಾ ಮಾ ಗಮದನಿಸ ನಾದಮಯಾ..

ಪಾ ಪಾಪ ದಪದ ದಪದ ದಪಗರಿ
ದಾದ ಸಾಸ ರೀರಿ ಗಾಗ ಪಪದಪಗಾ
ದಾ ದಾದ ಗಗ ದಾದ ರಿಸ ದಾದ
ಪಸದಾಪಗ ರಿಸರಿ ಗಪ ಸದಾ
ಸಾ ಸಾಸ ಸಸ ಸಾ ಸಾಸ ಸಸ ಸಾ ಸಾಸ ರಿಸದಾ
ನಿನಿಪ ಮಪದಾ ನಿನಿಪ ಮಪದಾ ನಿನಿಪ ಮಪ ದಾದಾದಾದಾದಾದಾನಿಪಾ...
ಆಆಆಆ..........

ಸಾ ನೀ ದಾ ಮಾ ಗಾ ಮಾ ದಾ ಮ ಗಾರಿ ನಿರಿಸಾ
ನಿಸ ಸಸ ಗರಿ ರಿರಿ ಮಗ ಗಗ ದಮ ಮಮ
ಮಗಗ ದಮಮ ನಿದದ ದನಿನಿ ಗರಿಸ
ಸರಿಗರಿಗ ನಿಸರಿಸರಿ
ಗರಿಸ ನಿದಪ ಗರಿಸ ದಮದನಿ
ತನನನ ತನನನ ತನನನ ತನನನ ತನನನ ನನನನನನನನನನನನ
ತೋಂತನ ನನನನ ತೋಂತನ ನನನನ
ತೋಂತನ ನನನನ ತೋಂತನ ನನನನ
ತೋಂತನ ನನನನ ತೋಂತನ ನನನನ
ತೋಂತನ ನನನನ ತೋಂತನ ನನನನ
ತೋಂತನ ನನನನ ತೋಂತನ ನನನನ
ತೋಂತನ ನನನನ ತೋಂತನ ನನನನ
ನಾದಮಯಾ... ಈ ಲೋಕವೆಲ್ಲಾ..... ನಾದಮಯಾ....

ಚಿತ್ರ: ಜೀವನ ಚೈತ್ರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯನ: ರಾಜ್ ಕುಮಾರ್

ಶಂಕರಾಭರಣಂ

ಓಂ....
ಓಂಕಾರ ನಾದಾನುಸಂಧಾನಮೌ ಗಾನಮೇ ಶಂಕರಾಭರಣಮು
ಶಂಕರ ಗಳ ನಿಗಳಮು ಶ್ರೀ ಹರಿ ಪದಕಮಲಮು
ರಾಗರತ್ನಮಾಲಿಕಾ ತರಳಮು ಶಂಕರಾಭರಣಮು...

ಶಾರದ ವೀಣಾ ರಾಗಚಂದ್ರಿಕಾ
ಪುಳಕಿತ ಶಾರದ ರಾತ್ರಮು
ನಾರದ ನೀರದ ಮಹತಿ ನಿನಾದ
ಗಮಕಿತ ಶ್ರಾವಣ ಗೀತಮು
ರಸಿಕುಲಕನುರಾಗಮೈ
ರಸರಂಗಲೋ ತಾನಮೈ
ಪಲ್ಲವಿಂಚು ಸಾಮವೇದ ಮಂತ್ರಮು ಶಂಕರಾಭರಣಮು...

ಅದ್ವೈತ ಸಿದ್ಧಿಕಿ ಅಮರತ್ವ ಲಬ್ಧಿಕಿ
ಗಾನಮೇ ಸೋಪಾನಮು
ಸತ್ಯ ಸಾಧನಕು ಸತ್ಯ ಶೋಧನಕು
ಸಂಗೀತಮೇ ಪ್ರಾಣಮು
ತ್ಯಾಗರಾಜ ಹೃದಯಮೈ ರಾಗರಾಜ ನಿಲಯಮೈ..
ಮುಕ್ತಿನೊಸಗು ಭಕ್ತಿಯೋಗ ಮಾರ್ಗಮು
ಮೃತಿಯಲೇನಿ ಸುಧಾಲಾಪ ಸ್ವರ್ಗಮು ಶಂಕರಾಭರಣಮು..

ಪ ದ ನಿ ಶಂಕರಾಭರಣಮು
ಪಮಗರಿ ಗಮಪದನಿ ಶಂಕರಾಭರಣಮು
ಸರಿಸ ನಿದಪ ನಿಸನಿ ದಪಮ ಸನಿದ ಪಮಗ ಪಮ ದಪ ನಿದ ಸನಿಗರಿ ಶಂಕರಾಭರಣಮು

ಆಹಾ..

ದಪ ದಮ ಮ ಪಾ ದಪ

ಮ ಪಾದಪ

ದಪ ದಮ ಮದ ಪಾ ಮಗ

ಮದ ಪಾ ಮಗ

ಗಮಮದ ದನಿನಿರಿ ಮದದನಿ ನಿರಿರಿಗ ನಿರಿರಿಗ ಗಮಮಗ ಗರಿರಿಸ ಸನಿನಿದದಪ ಶಂಕರಾಭರಣಮು

ರೀಸ ಸಾಸ ರಿರಿ ಸಾಸ ರೀ ಸಾಸ ಸನಿ ಸರಿಸ ನಿಸ ರಿರಿಸ ರಿರಿಸ ರಿಸ ನಿ ನಿ ನಿ
ದಾದ ನೀನಿ ದದ ನೀನಿ ದಾ ನೀನಿ ದನಿನಿ ದನಿಸ ದನಿ ದಗರಿ ಸಾನಿ ದಪ ದಾದಾದ
ಗರಿಗ ಮಮಗ ಗರಿಗ ಮಮಗ ಗರಿಗಮ ಪದಾಮ ಪದ ಮದ ಪಮಗರಿ ಸರಿಗಸರಿ
ಗರಿ ಮಗ ಪಮ ದಪಮಗ
ಪಮ ದಪ ನಿದ ಪಮ
ದಪ ನಿದ ಸನಿ ದಪ
ನಿದ ಸನಿ ರಿಸ ಗ ರಿ ಸ
ಗರಿಸನಿದ ರಿಸ
ರಿಸನಿದಪ ನಿದ
ಸನಿಸ ಪಮ ಪ
ರಿಸನಿದಪ ಸನಿದಪಮ ದಪಮಗರಿ ಗಮದ
ರಿಸನಿದಪ ಮಪ
ರಿಸನಿ ದಪನಿ
ದಪಮಗರಿ ರಿಸನಿದಪ ಮಗರಿಸನಿ ಶಂಕರಾಭರಣಮು

ಓಂಕಾರನಾದಾನುಸಂಧಾನಮೌ ಗಾನಮೈ
ಶಂಕರಾಭರಣಮು...

ಸಾಹಿತ್ಯ:- ವೆಟೂರಿ
ಸಂಗೀತ:- ಕೆ. ವಿ. ಮಹಾದೇವನ್
ಗಾಯನ:- ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ

ನೀನು ನೀನೇ ಇಲ್ಲಿ

ಹ್ಮ್...... ಹಯ್ಯೋ....!
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ

ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ

ನೀನು ನೀನೇ ಇಲ್ಲಿ ನಾನು ನಾನೇ

ನೀನು ನೀನೇ ಇಲ್ಲಿ ನಾನು ನಾನೇ

ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ

ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖಪ್ರಿಯ ರಾಗ.....
ಷಣ್ಮುಖಪ್ರಿಯ ರಾಗ ಮಾರ್ಗ ಹಿಂದೋಳವಾಗಿ ನಡೆಸಿದೆ ದರ್‌ಬಾರು ರಾಗ..
ಹಾಡುವೆಯಾ ಪಲ್ಲವಿಯಾ..
ಕೇಳುವೆಯಾ ಮೇಲೆ ಏಳುವೆಯಾ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ
ನೀನು ನೀನೇ ಇಲ್ಲಿ ನಾನು ನಾನೇ

ನೀನು ನೀನೇ ಇಲ್ಲಿ ನಾನು ನಾನೇ

ಈ ಸ್ವರವೆ ವಾದ
ಈಶ್ವರ ನಿನಾದ
ಜತಿಗತಿಜ ಕಾಗುಣಿತ ವೇದ
ಶಿವಸ್ಮರಣೆ ಸಂಗೀತ ಸ್ವಾದ
ಗಮಕಗಳ ಪಾಂಡಿತ್ಯ ಶೋಧ
ಸುಮತಿಗಳ ಸುಜ್ಞಾನ ಬೋಧ
ಪಲುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ
ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಶ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ಪರಮಾರ್ಥ

ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೆ ಭಕುತಿಯ ಮುಕುತಿಯ ಪರಮಾರ್ಥ
ನೀನು ನೀನೇ ಇಲ್ಲಿ ನಾನು ನಾನೇ

ಸಾ ಸಮಗಸರೀ ನಿಸಸನಿದ ದದನಿದಮ ಮಗಮದಾದಾದ್ದ ದಮದ ನೀನಿ ದದಾನಿ ಸಮಾಗ ನಿದದನಿ ದಮಪಸ ನೀನು ನೀನೇ ಇಲ್ಲಿ ನಾನು ನಾನೇ
ದನಿಸಗ ನಿಸ್ಸ ದನಿಸಗ ನಿಸಗಮ ಗಮ
ನಿಸಗಮ ಗಾಗಾ ಮಾಮಾ
ಗಸಗಸಗಸಗಸ ಮಗಮಗಮಗಮಗ
ಸಸಾ ಮಗ ಮಗ ಮಗ ಸನಿದಮಗಸ
ನೀನು ನೀನೇ ಇಲ್ಲಿ ನಾನು ನಾನೇ

ಮಗಮಗಮಗ ಗಮಗಮಗಮಗ
ದಮದಮದಮ ಮನಿಸನಿಸನಿಸ
ಸಸಸ ಸಾಸ ಸಸ ಸಗಸನಿ ನಿಸನಿದ
ಸಸಾಸ ನಿದನಿ ಸಾನಿದಮದಮಗಸ
ಸಗಮಗ ಗಮದನಿ ಮದನಿಸ ಗಸಸನಿಸ ದನಿ ಮದ ಮದನಿಸದ
ನೀನು ನೀನೇ ಇಲ್ಲಿ ನೀನು ನೀನೇ

ಸಾ ಪಾ ಸಾ
ಸನಿಪಮಗಸನಿಪ ಸಾ
ಸಗಮಪಗ ಸಗಮಪಮಗ ಸಗಮಪ ಮಪಮಪ ನಿನಿಪಮಪಾ
ಸರಿಗಪದಪಗಪ ದಾ ಸದದಾ
ದಪಗಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ
ನಿಸರಿಪಮ ರಿಪಮ ರಿಸರಿ
ಸಾ ಮಸ ಮಸ ಮಪದಸರಿ ರೀ ಸಾ ದಪಮ
ಮಪದದ್ದಾಪ ಮಪದದ್ದಾಪ ಮಪದದ್ದಾಪಮ ಪಸದಾ
ಪಮಪದಸಾ ಪಮಪದರೀ
ಸರಿರಿ ಸರಿರಿ ಸರಿರಿ ಸರಿರಿ ಸರಿಸ ದಸರಿ ದಸರಿ ಪದಸರಿ ರಿಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗ ಸನಿದಮಗ
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ.

ಚಿತ್ರ:- ಗಡಿಬಿಡಿಗಂಡ.
ಸಾಹಿತ್ಯ:- ಹಂಸಲೇಖ
ಸಂಗೀತ:- ಹಂಸಲೇಖ

ಹಣ್ಣು ಮಾರುವವನ ಹಾಡು

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತೀಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು

ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು

ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ

ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು

ಗಂಜಾಮ್ ಅಂಜೀರ್
ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನಾನಸು

ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ ||

- ಕಯ್ಯಾರ ಕಿಞ್ಞಣ್ಣ ರೈ

ಗೊಂಬೆ

ಮರದಲಿ ಮಾಡಿದ ಚೆಲುವಿನ ಗೊಂಬೆ
ಕರಚಳಕದಿ ಕೊರೆ ಕೊರೆದಿಹ ಗೊಂಬೆ
ಗರ ಗರ ತಿರುಗುವ ಮಾಟದ ಗೊಂಬೆ
ಕಿರಿಯರು ಹಿರಿಯರು ಮೆಚ್ಚುವ ಗೊಂಬೆ

ಚೆನ್ನಪಟ್ಟಣದ ಬಣ್ಣದ ಗೊಂಬೆ
ಚಿನ್ನದ ಹಾಗೆ ಹೊಳೆಯುವ ಗೊಂಬೆ
ರನ್ನದ ಹಾಗೆ ಮಿನುಗುವ ಗೊಂಬೆ
ಕಣ್ಣನು ಮಿಟುಕಿಸಿ ಆಡುವ ಗೊಂಬೆ

ಪಿಂ ಪಿಂ ಪಿಂ ಪಿಂ ಎನ್ನುವ ಗೊಂಬೆ
ಕು೦ಯ ಕು೦ಯ ಕು೦ಯ ಕು೦ಯ ಎನ್ನುವ ಗೊಂಬೆ
ಕೊಳ್ಳಿರಿ ಮಕ್ಕಳು ಪೀಂ ಪೀಂ ಗೊಂಬೆ
ಕೊಳ್ಳಿರಿ ಕ್ಯುಮ್ ಕ್ಯುಮ್ ಎನ್ನುವ ಗೊಂಬೆ

ಬನ್ನಿರಿ ಬನ್ನಿರಿ ಮುಂದಕೆ ನುಗ್ಗಿ
ಚನ್ನಿಗ ಬಂದನು ಭರದಿಂ ನುಗ್ಗಿ
ಕಂದನಿಗೆನ್ನುತ ನೋಡಿದ ಬಾಗಿ
ಗೊಂಬೆಯ ಕೊಂಡನು ಹರ್ಷಿತನಾಗಿ

ಕವಿ:- ಶಾ೦ತಿರಾಂ

ಮೊದಲು ಕೆಲಸ ಮಾಡುವೆ

ಮಗು:
ಇರುವೆ ಇರುವೆ ಕರಿಯ ಇರುವೆ
ನಾನು ಜೊತೆಗೆ ಬರುವೆ
ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ

ಇರುವೆ:
ಮಳೆಯ ಕಾಲ ಬರುತಲಿಹುದು
ನನಗೆ ಸಮಯವಿಲ್ಲ
ಅನ್ನ ಕೂಡಿ ಹಾಕಿ ಇಟ್ಟು
ಕರೆಯ ಬರುವೆನಲ್ಲ !

ಮಗು:
ನಾಯಿಮರಿ ನಾಯಿಮರಿ
ನಿನ್ನ ಜೊತೆಗೆ ಆಡುವೆ
ಕುಂಯ್ ಕುಂಯ್ ರಾಗ ಕಲಿಸು
ನಿನ್ನ ಹಾಗೆ ಹಾಡುವೆ

ನಾಯಿಮರಿ:
ಆಡಲಿಕ್ಕೆ ಹಾಡಲಿಕ್ಕೆ
ನನಗೆ ಸಮಯವಿಲ್ಲ
ಅನ್ನ ಹಾಕಿದವನ ಮನೆಯ
ಕಾಯುತಿರುವೆನಲ್ಲ !

ಮಗು:
ಜೇನು ಹುಳುವೆ ಜೇನು ಹುಳುವೆ
ಎಲ್ಲಿ ಹೋಗುತಿರುವೆ ?
ಕರೆದುಕೊಂಡು ಹೋಗು ನನ್ನ
ನಿನ್ನ ಜೊತೆಗೆ ಬರುವೆ

ಜೇನು ಹುಳ:
ಬನವ ಸುತ್ತಿ ಸುಳಿದು ನಾನು
ಜೇನನರಸಿ ತರುವೆ
ಈಗ ಬೇಡ ಚೈತ್ರ ಬರಲಿ
ಆಗ ನಾನು ಕರೆವೆ !

ಮಗು:
ಕುಹೂ ಕುಹೂ ಕೂಗುತಿರುವ
ಮಧುರ ಕಂಠ ಕೋಗಿಲೆ
ಎಲೆಯ ಬಲೆಯ ನೆಲೆಯೊಳಿರಲು
ನಾನು ಜೊತೆಗೆ ಬರುವೆ

ಕೋಗಿಲೆ:
ಕಾಕ ದೃಷ್ಟಿ ತಪ್ಪಿಸಲ್ಕೆ
ಹೊಂಚಿನಲ್ಲಿ ಇರುವೆ
ಚೈತ್ರ ಕಳೆಯೆ ಒಂಟಿ ಇರುವೆ
ಆಗ ಕರೆಯ ಬರುವೆ

ಮಗು:
ಯಾರು ಇವರು ನನ್ನ ಕೂಡೆ ಆಡಲಿಕ್ಕೆ ಒಲ್ಲರು
ತಮ್ಮ ತಮ್ಮ ಕೆಲಸದಲ್ಲಿ ವೇಳೆ ಕಳೆವರೆಲ್ಲರು
ಅವರ ಹಾಗೆ ಮೊದಲು ನನ್ನ ಕೆಲಸ ನಾನು ಮಾಡುವೆ
ಓದು ಬರಹ ಮುಗಿಸಿಕೊಂಡು ಸಮಯ ಉಳಿಯೆ ಆಡುವೆ !!

ಕವಿ : ಸಿಸು ಸಂಗಮೇಶ

ಬಾ ಬಾ ಗಿಳಿಯೇ

ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ
ಹಣ್ಣನು ಕೊಡುವೆನು ಬಾ ಬಾ
ಹಸಿರು ಪುಕ್ಕದ ಚೆಂದದ ಗಿಳಿಯೇ
ನನ್ನೊಡನಾಡಲು ಬಾ ಬಾ

ಕೆಂಪು ಮೂಗಿನ ಮುದ್ದಿನ ಗಿಳಿಯೇ
ಹಾಡನು ಕಲಿಸುವೆ ಬಾ ಬಾ
ಮರದಲಿ ಕುಳಿತು ನೋಡುವೆ ಏಕೆ ?
ಹಾರುತ ಹತ್ತಿರ ಬಾ ಬಾ

ಠಕ್ಕಿನ ಕಾಮಿ ಮನೆಯೊಳಗಿಲ್ಲ
ಹೆದರುವೆ ಏಕೆ ಬಾ ಬಾ
ಸೊಕ್ಕಿನ ಟಾಮಿ ಹತ್ತಿರವಿಲ್ಲ
ಕುಣಿ ಕುಣಿದಾಡುತ ಬಾ ಬಾ

ಹಾಡುವುದನ್ನು ಕಲಿಸುವೆ ನಿನಗೆ
ಹಾರಲು ಕಲಿಸು ಬಾ ಬಾ
ಹಣ್ಣನು ತಿಂದು ಹಾಲನು ಕುಡಿದು
ಮುಗಿಲಿಗೆ ಹಾರುವ ಬಾ ಬಾ

ಕವಿ:- ಶಂ.ಗು. ಬಿರಾದಾರ

ಆರಾಧಿಸುವೆ

ಆರಾಧಿಸುವೆ ಮದನಾರಿ
ಆಧರಿಸು ನೀ ದಯೆ ತೋರಿ
ಆರೋಧಿಸುವೆ ಮದನಾರಿ

ಅಂತರಂಗದಲಿ ನೆಲೆಸಿರುವೆ ಆಂತರ್ಯಾ ತಿಳಿಯದೆ ಏಕಿರುವೆ
ಸಂತತ ನಿನ್ನ ಸಹವಾಸ ನೀಡಿ ಸಂತೋಷದಿಂದೆನ್ನ ನಲಿಸೆಂದು ಕೋರುವೆ
ಆರಾಧಿಸುವೆ ಮದನಾರಿ
ಮೈದೋರಿ ಮುಂದೆ ಸಹಕರಿಸು
ಆ ಮಾರನುರವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು ತನ್ಮಯಗೊಳಿಸು ಮೈಮರೆಸು
ಚಿನ್ಮಯ ಭಾವ ತುಂಬುತ ಜೀವ
ಆನಂದ ಆನಂದ ಆನಂದವಾಗಲಿ
ಆರಾಧಿಸುವೆ ಮದನಾರಿ...

ಸ ನಿ ದ ಪ ಮಾ ಆರಾಧಿಸುವೇ
ಪ ದ ನಿ ಸ ಸ ಮ ದ ನೀ ನೀ ಸ ನಿ ದ ಪ ಮಾ ಆರಾಧಿಸುವೇ
ಸಾ ಸಾ ಸ ಸ ಸ ಗ ರೀ ಸ ಗ ರೀ ಸ ನಿ ದ ನಿ ನಿ ರಿ ರಿ ಸ ಸ ನಿ ನಿ ದ ಪ ದ ನಿ ಸಾ

ರೀರೀ ರಿಗ ರೀರೀ ರಿಗ ರೀರೀ ಗಮ ಗಾ ಗಾ ಗಮ ಗಾ ಗಾ
ಮಪದ ಪದನಿ ದನಿಸಾ ಸಾಸ ದನಿ ರೀರೀರೀ ದನಿ
ಗಗರಿ ಗಗರಿ ಗಗರಿ ಗಗರಿ ಸನಿದನಿ
ರಿರಿಸ ರಿರಿಸ ರಿರಿಸ ರಿರಿಸ ನಿದಪದನಿ ಗ ರಿ ಸ
ಗರಿಸನಿದ ರಿಸಾ ಗರಿಸನಿದ ರಿಸನಿದಪ ಸನಿದಪಮ ರಿ ಸ ನಿ
ರಿಸನಿ ದಪ ಸನಿ
ರಿಸನಿ ದಪ ಸನಿ ದಪಮ ರಿದಪಮಗ ಸನಿದ
ಸನಿದಪಮ ನಿಸ
ಸನಿದಪಮ ನಿದಪಮಗ ಸಗರಿಗಮಾ ಆರಾಧಿಸುವೆ ಮದನಾರಿ

ತತ್ತದಿಮ್ ತಕಿಟ ತಕತದಿಮ್ ತಕಿಟ ತತ್ತದಿಮ್ ತಕಿಟ ತಕದಿಮಿತಾ
ತಕತರಿ ತಕಜಣು ತಕತರಿ ತಕದಿಮಿ ತಕತರಿ ತಕಜಣು ತಾಂಗಿಡ್ ತಾಂಗಿಡ್ತಾ
ತಕಿಟ ದಿಕಿಟ ದಿಮಿ ತಕಜಣು ತಾ
ತಕಿಟ ದಿಕಿಟಜಣು ತಾಂಗಿಡ್ ತಾಂಗಿಡ್ ತಾ
ತತ್ ತಾಂಗಿಡ್ ತೋಮ್
ತರಿಕಿಡ್ ತಾಂಗಿಡ್ತೋಮ್
ತರಿಗಿಡತೋಮ್ ತರಿಗಿಡತೋಮ್
ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತದಿಗಿಣ ತೋಮ್ ತದಿಗಿಣತೋಮ್ ತದಿಗಿಣತೋಮ್ ತದಿಗಿಣತೋಮ್

ಚಿತ್ರ :- ಬಭ್ರುವಾಹನ
ಸಾಹಿತ್ಯ :- ಹುಣಸೂರು ಕೃಷ್ಣ ಮೂರ್ತಿ
ಸಂಗೀತ :- ಟಿ. ಜಿ. ಲಿಂಗಪ್ಪ

ಜಾತಕ ಪಕ್ಷಿ

ನಲ್ಲ...
ಎಂದು ಬರುವೆ ನೀ..?
ಎಂದು ಕರೆದೊಯ್ಯುವೆ ನೀ..?
ನನ್ನ ನಾ ಮರಳಿ ಪಡೆಯಬೇಕು.
ನಿನ್ನೊಂದಿಗಿದ್ದ ಮಧುರ ಕ್ಷಣಕಾಗಿ
ಕಾದಿರುವೆ ಜಾತಕ ಪಕ್ಷಿಯಾಗಿ..!
‪#‎ಶಾನೂ‬


ಆಗಮನ

ನಲ್ಲ...
ನನ್ನ ತಲೆ ಕಾಯುತಿದೆ ನಿನ್ನ ಭುಜವನ್ನು,
ಕಣ್ಣ ಹನಿ ಕೇಳುತಿದೆ ನಿನ್ನ ಕೈಬೆರಳನ್ನು,
ನನ್ನ ಮನ ಬಯಸುತ್ತಿದೆ ನಿನ್ನ ಸಾಂತ್ವನವನ್ನು,
ನಾನು ಕಾಯುತ್ತಿದ್ದೆನೆ -
ನಿನ್ನ ಆಗಮನವನ್ನು ....



ಭಾನುವಾರ, ಜೂನ್ 7, 2015

ಅಂಚೆಯವನು

ಓಲೆಯ ಹಂಚಲು ಹೊರಡುವೆ ನಾನು
ತೋರಲು ಆಗಸದಲಿ ಬಿಳಿ ಬಾನು
ಮನೆಯಲಿ ನೀವು ಬಿಸಿಲಲಿ ನಾನು
ಕಾಗದ ಬಂತು ಕಾಗದವು

ಹೆಗಲಲಿ ಹಳದಿಯ ಹಸುಬೆಯ ನೀಡಿ
ಕಾಲಲಿ ಚರ್ಮದ ಜೋಡಿ
ತಲೆಯಲಿ ಖಾಕಿಯ ಪಗಡಿಯ ನೋಡಿ
ಕಾಗದ ಬಂತು ಕಾಗದವು

ಒಳಗಿಂದಲಿ ಜನರೆನ್ನನು ಕಂಡು
ಬೇಗನೆ ಹೊರ ಅಂಗಳಕೈತಂದು
ಕಾಗದವಿದೆಯೇ ಎನ್ನುವುದುಂಟು
ಕಾಗದ ಬಂತು ಕಾಗದವು

ಸೊಗಸಿನ ಸುದ್ದಿಯ ಕೊಡುವೆನು ನಿಮಗೆ
ವ್ಯಸನದ ವಾರ್ತೆಯ ಕೊಡುವೆನು ತಮಗೆ
ಎಲ್ಲ ಸುದ್ದಿಗಳೊಂದೇ ನಮಗೆ
ಕಾಗದ ಬಂತು ಕಾಗದವು

ಓಲೆಯ ಕೊಡುವಧಿಕಾರಿಯು ನಾನು
ಆದರು ಅದರಲಿ ಬರೆದುದು ಏನು
ಎಂಬುದನರಿಯದ ಬಲು ಸುಖಿ ನಾನು
ಕಾಗದ ಬಂತು ಕಾಗದವು

ಎಲ್ಲೆಲ್ಲು ಸಂಗೀತವೇ..

ಎಲ್ಲೆಲ್ಲು ಸಂಗೀತವೇ......

ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸೌಂದರ್ಯವೇ
ಎಲ್ಲೆಲ್ಲು ಸಂಗೀತವೇ, ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತ
ನಿಸ ನಿಸ ರಿಗ ಸರಿಗ ಸರಿಗ ಮಪ ದಮ ನಿಸ ದನಿ ದನಿಸ ನಿನಿಸ ರಿಗ ಮಗ ಸನಿ ನಿದದ ದಮಮ ಗಸಾ ಸ
ಎಲ್ಲೆಲ್ಲು ಸಂಗೀತವೇ

ಸಂಧ್ಯೆಯು ಬಂದಾಗ ಆಗಸ ಅಂದ
ಆ ಉಷೆ ನಗುವಾಗ ಲೋಕವೆ ಚಂದ..
ಸರಿಗ ಸರಿಗ ಮಮ ಗಾಗ ಮಾಮ ಪದ
ಮಪದ ದಮ ಪದನಿ ಮಾ ಮ ಪಾ ಪ
ದದ ಪದನಿನಿ ಪದನಿ
ಸಾ ಸ ನೀನಿ ಸನಿ ಸರಿಗ ಸರಿ
ದಾದ ಮಾಮ ಗಗಸ
ಸಂಧ್ಯೆಯು ಬಂದಾಗ ಆಗಸ ಅಂದ
ಆ ಉಷೆ ನಗುವಾಗ ಲೋಕವೆ ಚಂದ
ಬಳುಕುವ ಲತೆಯಿಂದ ಅರಳಿದ ಹೂವಿಂದ
ಆ ಸುಮ ಚೆಲ್ಲುವ ಪರಿಮಳದಿಂದ
ಎಲ್ಲೆಲ್ಲು ಸೌಂದರ್ಯವೇ..

ಹರಿಯುವ ನೀರಲಿ
ಕಲ ಕಲರವವು
ಕೋಗಿಲೆ ಕೊರಳಿನ ಸುಮಧುರ ಸ್ವರವು
ಹರಿಯುವ ನೀರಲಿ ಕಲ ಕಲರವವು
ಕೋಗಿಲೆ ಕೊರಳಿನ ಸುಮಧುರ ಸ್ವರವು
ಭ್ರಮರದ ಝೇಂಕಾರ
ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದ
ಎಲ್ಲೆಲ್ಲು ಸಂಗೀತವೇ

ಸಂಗೀತ ಎಂದಿಗು ಸುರಗಂಗೆಯಂತೆ
ಸಂಗೀತ ಎಂದಿಗು ರವಿಕಾಂತಿಯಂತೆ
ಆ........... ಆ.......... ಆ........
ಸಂಗೀತ ಎಂದಿಗು ಸುರಗಂಗೆಯಂತೆ
ಸಂಗೀತ ಎಂದಿಗು ರವಿಕಾಂತಿಯಂತೆ
ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ
ಆ ದೈವ ಸುಧೆಯಿಂದ ಪರಮಾರ್ಥವಂತೆ
ಎಲ್ಲೆಲ್ಲು ಸಂಗೀತವೇ, ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತವೇ

ಸಾಹಿತ್ಯ:- ಚಿ. ಉದಯಶಂಕರ್
ಸಂಗೀತ:- ವಿಜಯಭಾಸ್ಕರ್
ಗಾಯನ:- ಕೆ. ಜೆ. ಏಸುದಾಸ್ 

ಅನ್ನದಾತ

ಇವನೆ ನೋಡು ಅನ್ನದಾತ
ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು

ಮಳೆಯ ಗುಡುಗು ಚಳಿಯ ನಡುಗು
ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ
ಒಂದೇ ಸವನೆ ದುಡಿಯುತ

ಗಟ್ಟಿ ದೇಹ ದೊಡ್ಡ ಮನಸು
ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು
ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ
ಹೊಂದಿಕೊಂಡು ನಡೆವರು

ಕವಿ:- ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ

ಮಧುರ ಮಧುರವೀ

ಮಧುರ ಮಧುರವೀ ಮಂಜುಳಗಾನ
ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ

ಸಿರಿ ಸಂಭ್ರಮ ಸ್ವರ, ಬೆರೆಸಿಹ ಗಾಳಿಯ
ಪರಿಮಳ ಸ್ವಾಗತ, ಪ್ರಿಯ ಪ್ರಾಣ
ಪರವಶ ಭಾವದ, ರಾಗವ ತೋರಿ
ಪುಳುಕಿತ ಗೊಳಿಸಿದೆ, ಮನವೀಣಾ
ಪುಳುಕಿತ ಗೊಳಿಸಿದೆ, ಮನವೀಣಾ
ಮಧುರ ಮಧುರವೀ ಮಂಜುಳಗಾನ

ತುಂಬಿದ ಯೌವನ ಬಿಂಬದ ಕಾಂತಿಯ
ಸಂಧಿಸೆ ಕಾದಿದೆ ಸುಮಬಾಣ
ದುಂಬಿಯ ನೋಟದ ಕಾತರ ಕಂಡು
ದುಂಬಿಯ ನೋಟದ ಕಾತರ ಕಂಡು
ಅಂಬರ ನೀಡಿದೆ ಮಧುಪಾನ
ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ

ಈ ನವ ಋತುವೇ ಮೋಹಮಯ
ಕಾಣುವ ಚೆಲುವೇ ಕಲೆ ನಿಲಯ
ಈ ನವ ಋತುವೇ ಮೋಹಮಯ
ಕಾಣುವ ಚೆಲುವೇ ಕಲೆ ನಿಲಯ
ಪಾವನ ಭೋಗದ ಪ್ರೇಮಾದರವೆ
ಜೀವನ ಯೋಗದ ಈ ಸುದಿನ
ಮಧುರ ಮಧುರವೀ ಮಂಜುಳಗಾನ
ಹೃದಯ ತಣಿಸುವ ಹೊಸ ತಾನ
ಮಧುರ ಮಧುರವೀ ಮಂಜುಳಗಾನ

ಚಿತ್ರ:- ಸತೀ ಸುಕನ್ಯಾ
ಸಾಹಿತ್ಯ:- ಚಿ. ಉದಯಶಂಕರ್
ಗಾಯನ:- ಪಿ. ಬಿ. ಶ್ರೀನಿವಾಸ್ ಮತ್ತು ಬಿ. ಕೆ. ಸುಮಿತ್ರಾ

ಗೋಪೀಲೋಲ

ಕೃಷ್ಣಾ... ಗೋಪೀಲೋಲ
ಹೇ ಗೋಪಾಲ...

ಗೋಪೀಲೋಲ ಹೇ ಗೋಪಾಲ
ಈ ಜಗವೆಲ್ಲ ನಿನ್ನದೆ ಜಾಲ
ಏತಕೆ ಈ ಲೀಲಾ ಗೋಪಾಲಕೃಷ್ಣ, ಏತಕೆ ಈ ಲೀಲಾ
ಗೋಪೀಲೋಲ ಹೇ ಗೋಪಾಲ..

ನೀನೇ ತುಂಬಿದ ಆಸೆಗಳಲ್ಲಿ
ನೀನೆ ನಿರಾಸೆಯ ತೋರುವೆಯಾ
ನೀನೇ ಉರಿಸಿದ ದೀಪಗಳನ್ನು
ನೀನೇ ಆರಿಸಿ ನೋಡುವೆಯಾ
ನೀನೇ ನೀಡಿದ ಕಣ್ಣುಗಳಲ್ಲಿ
ನೀನೇ ತುಂಬುವೆ ಕಂಬನಿಯ, ಗೋಪಾಲಕೃಷ್ಣ
ನೀನೇ ತುಂಬುವೆ ಕಂಬನಿಯ
ಗೋಪೀಲೋಲ ಹೇ ಗೋಪಾಲ...

ಸುಂದರ ಹೂಗಳ ಜೊತೆಯಲ್ಲಿ ನೀ
ಮುಳ್ಳುಗಳನ್ನು ಸೇರಿಸುವೆ
ಬೆಳ್ಳನೆ ಬೆಳಕಿನ ಜೊತೆಯಲೆ ನೀನು
ಕರಿನೆರಳನ್ನು ತೋರಿಸುವೆ
ಲೋಕದ ಎಲ್ಲಾ ಸೂತ್ರವ ಹಿಡಿದು
ಎಲ್ಲೋ ಅಡಗಿ ಆಡಿಸುವೆ, ಗೋಪಾಲಕೃಷ್ಣ
ಅಡಗಿ ಆಡಿಸುವೆ..

ಗೋಪೀಲೋಲ ಹೇ ಗೋಪಾಲ
ಈ ಜಗವೆಲ್ಲ ನಿನ್ನದೆ ಜಾಲ
ಏತಕೆ ಈ ಲೀಲಾ ಗೋಪಾಲಕೃಷ್ಣ, ಏತಕೆ ಈ ಲೀಲಾ
ಗೋಪೀಲೋಲ ಹೇ ಗೋಪಾಲ..

ಚಿತ್ರ:- ನಾರಿ ಮುನಿದರೆ ಮಾರಿ
ಸಾಹಿತ್ಯ:- ಗೀತಪ್ರಿಯ
ಸಂಗೀತ:- ರಾಜನ್ - ನಾಗೇಂದ್ರ
ಗಾಯನ:- ಪಿ. ಸುಶೀಲ

ಶನಿವಾರ, ಜೂನ್ 6, 2015

ವಂದನೆ...

ವಂದನೆ...
ಸಕಲ ಕಾರ್ಯಕಾರಣಗೆ ಸಾಷ್ಟಾಂಗ ವಂದನೆ
ಸ್ಪೂರ್ತಿ ತಂದ ಶಕ್ತಿಗೆಲ್ಲ ವಂದನೆ, ಅಭಿವಂದನೆ
ಸಕಲ ಕಾರ್ಯಕಾರಣಗೆ ಸಾಷ್ಟಾಂಗ ವಂದನೆ
ಸ್ಪೂರ್ತಿ ತಂದ ಶಕ್ತಿಗೆಲ್ಲ ವಂದನೆ, ಅಭಿವಂದನೆ
ಸಕಲ ಕಾರ್ಯಕಾರಣಗೆ ಸಾಷ್ಟಾಂಗ ವಂದನೆ

ನಾನು ಲಯವೆ ಆದಂಥ ನಾದೋಪಾಸನೆ
ನಾದದಲ್ಲಿ ಲೀನವಾದ ವೇದೋಪಾಸನೆ
ನಾದ ವೇದ ಒಂದೇ ಆದ ದೇವೋಪಾಸನೆ
ನಾದಬ್ರಹ್ಮನಿಗೇ ನನ್ನ ವಂದನೆ ಅಭಿವಂದನೆ
ಸಕಲ ಕಾರ್ಯಕಾರಣಗೆ ಸಾಷ್ಟಾಂಗ ವಂದನೆ

ತನುವಿನಲ್ಲಿ ತನನವೆನುವ ತನ್ಮಯಗೆ ತಲೆಬಾಗುವೆ
ಅಣುಅಣುವಿನ ಕಣಕಣದ ಚೇತನಕೆ ಶರಣೆನ್ನುವೆ ।೨।
ನಾರದ ಪುರಂದರ ನುಡಿದೇವಿಗೆ ನಮಿಸುವೆ।೨।
ನಾದಬಿಂದು ಕಲಾತೀತ ನಿನಗೆ ನಮಿಸುವೆ
ನಾದಬಿಂದು..
ಪಮಪಾ ರಿಮಪಾ ಪಾ ಮ ನಾದಬಿಂದು..
ಸಸನಿ ರಿರಿಸಸನಿಪಮ ನಾದಬಿಂದು..
ಸಾಸಾಸ ಸನಿ ನಿಸಸ ರಿರಿ ಸಾ ಸಾ ಸ ಸರಿಮರಿಸನಿ
ಸಸರಿ ಸಾರಿ ನಿನಿಸ ನೀಸ ಪಪನಿ ಪಾನಿ ಮಪನಿಸರಿಮ ರಿಮರಿಸ
ಸರಿಮ ರಿಮಪಮ ರಿರಿ ಸಸ ನಿನಿ ಪಪ ಮಮ ರಿರಿ
ಸರಿಮರಿ ಪ ಮಪನಿ ಪನಿಸ ನಿಸರಿ ಸರಿಮ
ರಿಮರಿ ಸರಿಸ ಪಮರಿ
ಪಮ ರಿಸರಿ ಮರಿಸ
ಮರಿಸನಿಪ ರಿಸನಿ
ರಿ ಸ ನಿಪಮ ನಾದಬಿಂದು ಕಲಾತೀತ ನಿನಗೆ ನಮಿಸುವೆ
ಸಕಲ ಕಾರ್ಯಕಾರಣಗೆ ಸಾಷ್ಟಾಂಗ ವಂದನೆ
ಸ್ಪೂರ್ತಿ ತಂದ ಶಕ್ತಿಗೆಲ್ಲ ವಂದನೆ, ಅಭಿವಂದನೆ

ಚಿತ್ರ:- ಮಲಯಮಾರುತ
ಸಾಹಿತ್ಯ:- ವಿಜಯನಾರಸಿಂಹ
ಗಾಯನ:- ಕೆ ಜೆ ಯೇಸುದಾಸ್
ಸಂಗೀತ:- ವಿಜಯಭಾಸ್ಕರ್

ಭಕ್ತಿಗೀತೆ

ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ

ಕರುಣಾಸಾಗರ ಗಜಮುಖನ
ಶರಣು ಹೊಂದಿದೆ ಭಕ್ತಜನ
ಆಲಿಸಿ ಮೊರೆಯನು ಈ ಕ್ಷಣ
ಪಾಲಿಸಿ ಪೊರೆವನು ದಯಾಘನ

ಚೆಲುವ ಚೆನ್ನಿಗನೆ ನಂಬಿದೆ ನಾ
ಚೆಲ್ಲು ಪ್ರೇಮದ ಹೊಂಗಿರಣ
ಕಾಣೆನು ನಿನಗೆ ಸರಿಸಮನ
ಕಾಯುವ ದೈವವು ನೀನೆ ಕಣಾ

ಗಣಪತಿ ನೀಡಲು ಅಭಯಾ
ಕಾರ್ಯಗಳೆಲ್ಲ ವಿಜಯ
ಕರಿಮುಖನೊಲಿದರೆ ಇಲ್ಲ ಅಪಾಯ
ಭಕ್ತಿಯೆ ಗಣಪನು ಒಲಿವ ಉಪಾಯ

ಶುಕ್ರವಾರ, ಜೂನ್ 5, 2015

ಶಬರಿ

  #ನಲ್ಲ

ನೀನಿಲ್ಲದ ಜೀವನ
ಮರುಭೂಮಿಯಂತೆ..
ನೀ ಬಾ ಇಲ್ಲಿ
ಓಯಾಸಿಸಿನಂತೆ..
ನಾ ಕಾದಿರುವೆ ನಿನಗಾಗಿ
ಶಬರಿಯಂತೆ...
#ಶಾನೂ

ನೀನಿಲ್ಲದೆ


         #‎ನಲ್ಲ ನೀನಿಲ್ಲದೆ
ನೀನಿಲ್ಲದ ಬದುಕು ಮರುಭೂಮಿಯಂತೆ..
ನೀನಿಲ್ಲದ ಬಾಳು ನೀರಿಲ್ಲದ ಬಾವಿಯಂತೆ..
ನೀನಿಲ್ಲದ ಜೀವನ ದೇವರಿಲ್ಲದ ಗುಡಿಯಂತೆ..
.
.
ನಲ್ಲಾ..
ನೀನಿಲ್ಲದಿದ್ದರೆ ಜಗತ್ತೇ ಬರಿದಾದಂತೆ..!
‪#‎ಶಾನೂ

ಗುರುವಾರ, ಜೂನ್ 4, 2015

ನಾಡಗೀತೆ

 ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ.
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ.
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸನ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸೀಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ರಚನೆ: ಕುವೆಂಪು