ಭಾನುವಾರ, ಜೂನ್ 7, 2015

ಗೋಪೀಲೋಲ

ಕೃಷ್ಣಾ... ಗೋಪೀಲೋಲ
ಹೇ ಗೋಪಾಲ...

ಗೋಪೀಲೋಲ ಹೇ ಗೋಪಾಲ
ಈ ಜಗವೆಲ್ಲ ನಿನ್ನದೆ ಜಾಲ
ಏತಕೆ ಈ ಲೀಲಾ ಗೋಪಾಲಕೃಷ್ಣ, ಏತಕೆ ಈ ಲೀಲಾ
ಗೋಪೀಲೋಲ ಹೇ ಗೋಪಾಲ..

ನೀನೇ ತುಂಬಿದ ಆಸೆಗಳಲ್ಲಿ
ನೀನೆ ನಿರಾಸೆಯ ತೋರುವೆಯಾ
ನೀನೇ ಉರಿಸಿದ ದೀಪಗಳನ್ನು
ನೀನೇ ಆರಿಸಿ ನೋಡುವೆಯಾ
ನೀನೇ ನೀಡಿದ ಕಣ್ಣುಗಳಲ್ಲಿ
ನೀನೇ ತುಂಬುವೆ ಕಂಬನಿಯ, ಗೋಪಾಲಕೃಷ್ಣ
ನೀನೇ ತುಂಬುವೆ ಕಂಬನಿಯ
ಗೋಪೀಲೋಲ ಹೇ ಗೋಪಾಲ...

ಸುಂದರ ಹೂಗಳ ಜೊತೆಯಲ್ಲಿ ನೀ
ಮುಳ್ಳುಗಳನ್ನು ಸೇರಿಸುವೆ
ಬೆಳ್ಳನೆ ಬೆಳಕಿನ ಜೊತೆಯಲೆ ನೀನು
ಕರಿನೆರಳನ್ನು ತೋರಿಸುವೆ
ಲೋಕದ ಎಲ್ಲಾ ಸೂತ್ರವ ಹಿಡಿದು
ಎಲ್ಲೋ ಅಡಗಿ ಆಡಿಸುವೆ, ಗೋಪಾಲಕೃಷ್ಣ
ಅಡಗಿ ಆಡಿಸುವೆ..

ಗೋಪೀಲೋಲ ಹೇ ಗೋಪಾಲ
ಈ ಜಗವೆಲ್ಲ ನಿನ್ನದೆ ಜಾಲ
ಏತಕೆ ಈ ಲೀಲಾ ಗೋಪಾಲಕೃಷ್ಣ, ಏತಕೆ ಈ ಲೀಲಾ
ಗೋಪೀಲೋಲ ಹೇ ಗೋಪಾಲ..

ಚಿತ್ರ:- ನಾರಿ ಮುನಿದರೆ ಮಾರಿ
ಸಾಹಿತ್ಯ:- ಗೀತಪ್ರಿಯ
ಸಂಗೀತ:- ರಾಜನ್ - ನಾಗೇಂದ್ರ
ಗಾಯನ:- ಪಿ. ಸುಶೀಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ